Skill Development and Self-Reliance
Eskill Youth and Women – Build a Self-Reliance Future
Many unemployed youth and women are unable to realize their full potential due to lack of job opportunities and lack of appropriate skills. To address this challenge, Kalabandhu Foundation strives to bring about a positive change in their lives by providing skill development training, vocational guidance and necessary support for self-employment.
Through our programs, youth and women are helped to develop the skills required for employment, increase job opportunities and become financially independent through self-employment.
Our Mission
- Provide skills training for employment
- Increase employment opportunities for youth and women
- Promote self-employment and entrepreneurship
- Build economic self-reliance and self-confidence
- Help improve the living standards of families
- Build a self-reliant and empowered community in society
Your support – change their future
Every donation you make can help a young man or woman learn a new skill, get a job or start self-employment.
One skill – one job – a self-reliant family – a empowered society.
Join your hands today
Through your cooperation, give a skill to a young man.
Give a woman a chance to be self-reliant. Be a partner in changing the future of a family.
Donate Now | Support Skill Development
Your donation is not just a donation; it is a new opportunity for a life.
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ
ಯುವಕರು ಮತ್ತು ಮಹಿಳೆಯರಿಗೆ ಕೌಶಲ್ಯ ನೀಡಿ – ಸ್ವಾವಲಂಬಿ ಭವಿಷ್ಯ ನಿರ್ಮಿಸೋಣ
ಉದ್ಯೋಗಾವಕಾಶಗಳ ಕೊರತೆ ಮತ್ತು ಸೂಕ್ತ ಕೌಶಲ್ಯದ ಅಭಾವದಿಂದ ಅನೇಕ ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸವಾಲನ್ನು ಎದುರಿಸಲು ಕಲಾಬಂಧು ಫೌಂಡೇಶನ್ ಕೌಶಲ್ಯಾಭಿವೃದ್ಧಿ ತರಬೇತಿ, ವೃತ್ತಿಪರ ಮಾರ್ಗದರ್ಶನ ಮತ್ತು ಸ್ವಯಂ ಉದ್ಯೋಗಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತದೆ.
ನಮ್ಮ ಕಾರ್ಯಕ್ರಮಗಳ ಮೂಲಕ ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು, ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವು ನೀಡಲಾಗುತ್ತದೆ.
ನಮ್ಮ ಉದ್ದೇಶ
- ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವುದು
- ಯುವಕರು ಮತ್ತು ಮಹಿಳೆಯರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು
- ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು
- ಆರ್ಥಿಕ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು
- ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ನೆರವಾಗುವುದು
- ಸಮಾಜದಲ್ಲಿ ಸ್ವಾವಲಂಬಿ ಮತ್ತು ಸಬಲ ಸಮುದಾಯವನ್ನು ನಿರ್ಮಿಸುವುದು
ನಿಮ್ಮ ಬೆಂಬಲ – ಅವರ ಭವಿಷ್ಯದ ಬದಲಾವಣೆ
ನೀವು ನೀಡುವ ಪ್ರತಿಯೊಂದು ದೇಣಿಗೆಯೂ ಒಬ್ಬ ಯುವಕ ಅಥವಾ ಮಹಿಳೆಗೆ ಹೊಸ ಕೌಶಲ್ಯ ಕಲಿಯಲು, ಉದ್ಯೋಗ ಪಡೆಯಲು ಅಥವಾ ಸ್ವಯಂ ಉದ್ಯೋಗ ಆರಂಭಿಸಲು ದಾರಿಯಾಗಬಹುದು.
ಒಂದು ಕೌಶಲ್ಯ – ಒಂದು ಉದ್ಯೋಗ – ಒಂದು ಸ್ವಾವಲಂಬಿ ಕುಟುಂಬ – ಒಂದು ಸಬಲ ಸಮಾಜ.
ಇಂದು ನಿಮ್ಮ ಕೈಜೋಡಿಸಿ - ನಿಮ್ಮ ಸಹಕಾರದ ಮೂಲಕ ಒಬ್ಬ ಯುವಕನಿಗೆ ಕೌಶಲ್ಯ ನೀಡಿ.
ಒಬ್ಬ ಮಹಿಳೆಗೆ ಸ್ವಾವಲಂಬನೆಯ ಅವಕಾಶ ನೀಡಿ. ಒಂದು ಕುಟುಂಬದ ಭವಿಷ್ಯವನ್ನು ಬದಲಿಸುವಲ್ಲಿ ಪಾಲುದಾರರಾಗಿ.
Donate Now | Support Skill Development
ನಿಮ್ಮ ದೇಣಿಗೆ ಕೇವಲ ನೆರವಲ್ಲ; ಅದು ಒಂದು ಬದುಕಿಗೆ ಹೊಸ ಅವಕಾಶ.




Social Media
Our Bank Details
Bank: Canara Bank
SB Account No: 2529101024586 IFSC Code No.: CNRB0002529 Branch: Basaveshwaranagar
Bengaluru - 560079
All Types of Online Payments are accepted


