Join Hands for Better Health – One Contribution, A Ray of Hope for Many Lives
Health is a fundamental right of every individual. However, many economically disadvantaged and underserved families still do not have easy access to essential medical services, health check-ups, and health awareness. Through its healthcare initiatives, KALABANDHU Foundation is committed to building a healthier and happier society by organizing free medical and dental health camps, providing medical support, promoting nutrition, and conducting health awareness programmes for rural and underserved communities. Your support is invaluable in helping us extend these essential services to many more people in need. Every donation you make can provide a health check-up for a needy individual, create health awareness for a family, or become a ray of hope for someone requiring medical assistance. Your donation is not just money—it is support for a healthier life. It brings comfort to a family. It gives hope to someone in need. Your support today is your contribution towards building a healthier society tomorrow. Join hands with us. Be a partner in caring for the health of those in need.
Together, let us build a healthier and happier world.
ಆರೋಗ್ಯಕ್ಕಾಗಿ ನಿಮ್ಮ ಕೈಜೋಡಿಕೆ – ಒಂದು ಕೊಡುಗೆ, ಅನೇಕ ಜೀವಗಳಿಗೆ ಆಶಾಕಿರಣ
ಆರೋಗ್ಯವೇ ಪ್ರತಿಯೊಬ್ಬರ ಮೂಲಭೂತ ಹಕ್ಕು. ಆದರೆ ಆರ್ಥಿಕವಾಗಿ ಹಿಂದುಳಿದ ಮತ್ತು ಸೌಲಭ್ಯ ವಂಚಿತ ಅನೇಕ ಕುಟುಂಬಗಳಿಗೆ ಅಗತ್ಯವಾದ ವೈದ್ಯಕೀಯ ಸೇವೆ, ಆರೋಗ್ಯ ತಪಾಸಣೆ ಮತ್ತು ಆರೋಗ್ಯದ ಅರಿವು ಇನ್ನೂ ಸುಲಭವಾಗಿ ದೊರೆಯುತ್ತಿಲ್ಲ. ಕಲಾಬಂಧು ಫೌಂಡೇಶನ್ ಆರೋಗ್ಯ ರಕ್ಷಣೆಯ ಉಪಕ್ರಮಗಳ ಮೂಲಕ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಸಮುದಾಯಗಳಿಗೆ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರಗಳು, ವೈದ್ಯಕೀಯ ಬೆಂಬಲ, ಪೌಷ್ಟಿಕಾಂಶ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ತಲುಪಿಸುವ ಮೂಲಕ ಆರೋಗ್ಯಕರ ಮತ್ತು ಸಂತಸದ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ. ಈ ಮಹತ್ವದ ಸೇವಾ ಕಾರ್ಯಗಳನ್ನು ಇನ್ನಷ್ಟು ಜನರಿಗೆ ತಲುಪಿಸಲು ನಿಮ್ಮ ಸಹಕಾರ ಅತ್ಯಂತ ಅಮೂಲ್ಯವಾಗಿದೆ. ನಿಮ್ಮ ಪ್ರತಿಯೊಂದು ದೇಣಿಗೆಯೂ ಅಗತ್ಯವಿರುವ ವ್ಯಕ್ತಿಯ ಆರೋಗ್ಯ ತಪಾಸಣೆಗೆ, ಒಂದು ಕುಟುಂಬದ ಆರೋಗ್ಯ ಜಾಗೃತಿಗೆ ಅಥವಾ ವೈದ್ಯಕೀಯ ನೆರವಿನ ಅಗತ್ಯವಿರುವ ಜೀವಕ್ಕೆ ಆಶಾಕಿರಣವಾಗಬಹುದು. ನಿಮ್ಮ ದೇಣಿಗೆ ಕೇವಲ ಹಣವಲ್ಲ… ಅದು ಒಂದು ಆರೋಗ್ಯಕರ ಬದುಕಿಗೆ ಬೆಂಬಲ. ಅದು ಒಂದು ಕುಟುಂಬಕ್ಕೆ ನೆಮ್ಮದಿ. ಅದು ಒಂದು ಜೀವಕ್ಕೆ ಭರವಸೆ. ಇಂದು ನಿಮ್ಮ ಕೈಜೋಡಿಕೆ – ನಾಳೆಯ ಆರೋಗ್ಯಕರ ಸಮಾಜಕ್ಕೆ ನಿಮ್ಮ ಕೊಡುಗೆ.
ಬನ್ನಿ, ನಮ್ಮೊಂದಿಗೆ ಕೈಜೋಡಿಸಿ. ಅಗತ್ಯವಿರುವವರ ಆರೋಗ್ಯದ ಕಾಳಜಿಯಲ್ಲಿ ನಿಮ್ಮ ಪಾಲುದಾರಿಕೆಯನ್ನು ನೀಡಿ. ನಿಮ್ಮ ಸಹಕಾರದೊಂದಿಗೆ… ಆರೋಗ್ಯಕರ ಮತ್ತು ಸಂತೋಷಕರ ಜಗತ್ತಿನ ನಿರ್ಮಾಣ.










Social Media
Our Bank Details
Bank: Canara Bank
SB Account No: 2529101024586 IFSC Code No.: CNRB0002529 Branch: Basaveshwaranagar
Bengaluru - 560079
All Types of Online Payments are accepted


